Thursday

ದೀಪಿಕಾ ಸೇ -೨







ಪ್ರೀತಿಯಿಂದ ’ದೀಪು’ ಅಂತಿದ್ದೆ. ಆಗಿನ್ನು ಅವನ ಬಗ್ಗೆ ಸರಿಯಾಗಿ ಗೊತ್ತೂ ಇರಲಿಲ್ಲ ನನಗೆ. ಆಗ ಯಾಕೆ ಈಗಲೂ..! ತುಂಬಾ ಇಷ್ಟಪಟ್ಟ ಹುಡುಗ... ಯಾಕೇಂತ ಗೊತ್ತಿಲ್ಲ. ಪ್ರೀತಿಯಲ್ಲದ ಪ್ರೀತಿಯ ಮೋಹ ಅದಾಗಿತ್ತು. ಓದ್ತಿರೋ ನಿಮ್ಗೆಲ್ಲಾ ನಗು ಬರಬಹುದು. ನಾನು ಹೇಳ್ತಾಯಿದೀನಿ ನೀವ್ ಕಳ್ಳರು ಹೇಳಲ್ಲ ಅಷ್ಟೆ... ಒಳ್ಳೆ ಫ಼್ರೆಂಡ್ ಅಂತಿದ್ದೆ, ಯಾಕೆ ಗೆಳೆತನ ಮಾಡಿದೆ? ಗೊತ್ತಿಲ್ಲ. ಹೇಗೆ ಗೆಳೆಯರಾದ್ವಿ? ಅದೂ ಗೊತ್ತಿಲ್ಲ. ಯಾವ ಹುಡುಗರ ಮೇಲೂ ಬರದ, ಬಾರದ ವಯಸ್ಸಿನ ಆಕರ್ಷಣೆ ಅವನಲ್ಲಿ ನನಗಿತ್ತು ಯಾಕೇಂತಾನು ಗೊತ್ತಿಲ್ಲ. ಈ ಗೊತ್ತು-ಗೊತ್ತಿಲ್ಲದ, ಪ್ರೀತಿಯಲ್ಲದ ಪ್ರೀತಿಯ ಮೋಹ ನನಗಾಗ. ಇಲ್ಲಿ ಮುಚ್ಚಿಡೊದೇನಿಲ್ಲ, ಅರ್ಥ ಮಾಡಿಕೊಳ್ಳೊ ವಯಸ್ಸು, ಮನಸ್ಸು ನಮ್ಮದು. ಮನಸ್ಸು ಬಿಚ್ಚಿ ಮಾತಾಡ್ರಿ.... ಆದ್ರೆ ಈಗ ದೀಪು ನನಗೆ ಒಬ್ಬ ಒಳ್ಳೆಯ ಸ್ನೇಹಿತ. ನವೋದಯ ಅಂದ್ರೆನೆ ಗೆಳೆಯರ ಸಂತೆ ಅನ್ಸುತ್ತೆ ನಂಗೆ. ಈಗಲೂ ಆ ಗೆಳೆಯ/ಗೆಳತಿಯರಿಗೋಸ್ಕರ ಮನ ಮಿಡಿತಾ ಇದೆ.ನೀವೆ ಹೇಳೀ ಎಷ್ಟ್ ಜನಕ್ಕೆ ನಾನ್ ನೆನಪಿದೀನಿ? ಆದರೇ ಕಳೆದಿದ್ದು ಮೂರು ವರ್ಷ ಆದ್ರೂ ಕೆಲವರಿಗೆ ಇನ್ನೂ ನನಪಿದಿನಿ.. ಅಷ್ಟ್ ಸಾಕು ನಂಗೆ...
ನನ್ನ ಪ್ರೀತಿಯ ಗೆಳೆಯರ ನಿರೀಕ್ಷೆಯಲ್ಲಿ......
ನಿಮ್ಮ ಪ್ರೀತಿಯ ದೀಪು ..

0 comments: