ನಾನು ನವೋದಯ ಶಾಲೆಗೆ ಬಂದಿದ್ದೆ ನನ್ನ ಜೀವನದ ಮರೆಯಲಾಗದ ತಿರುವು ಅಂತಾನೇ ಹೇಳಬಹುದು ಸ್ನೇಹಿತರೇ. ಯಾಕೆ ಗೊತ್ತಾ? ಉಡುವಳ್ಳಿಗೆ ಬರಲು ನನಗೂ ಇಷ್ಟವಿರಲಿಲ್ಲ (ಹೆದರಿಕೆ ಇತ್ತು), ಮನೆಯಲ್ಲೂ ಕಳಿಸಲು ತಯಾರಿರಲಿಲ್ಲ. ಅದಕ್ಕೆ ಮೂರೇ ವರ್ಷಕ್ಕೆ ಮರಳಿ ಗೂಡಿಗೆ!
ಆದರೆ ನವೋದಯದಲ್ಲಿ ಮೊದಲನೆಯ ದಿನವೇ ಎಲ್ಲದು ಹೊಸತು, ಹೊಸ ಅನುಭವ, ಹೊಸ ಗೆಳೆಯರ ಪರಿಚಯ, ಅದೊಂದು ಊಹಿಸದ ಲೋಕ, ಕನಸ ಕಾಣಲು ಶುರು ಮಾಡಿದ ಜಾಗ ಅದು!ಅಲ್ಲಿಯ ಜೀವನದ ಬಗ್ಗೆ ಮೊದಲಿಗೆ ಪರಿಚಯಿಸಿದ್ದು ನನ್ನ ಪ್ರೀತಿಯ ಅಕ್ಕ ’ಲತಾ’ (ಲತಾ.ಬಿ.ಈ.) ಜೀವನದಲ್ಲಿ ಗೆಳೆಯರ ಜೊತೆಗಿನ ಸಲಿಗೆ, ದೊಡ್ಡವರಿಗೆ ಕೊಡುವ ಗೌರವ, ಮಾತನಾಡಿಸುವ ಬಗೆ ಹೇಗೆ..... ಅಪ್ಪ-ಅಮ್ಮನಿಗಿಂತ ಮುಂಚೆ ಜೀವನದ ಹಾದಿಯ ಅರಿವು ಮೂಡಿಸಿದಾಕೆ....
ನಾನು ೬ನೇ ತರಗತಿಯಲ್ಲಿದ್ದಾಗ ಅನಿತಕ್ಕ +೨. ನನ್ನ ಇತರ ಗೆಳತಿಯರಿಗೆ ಇದ್ದ ಪ್ರೌಢಿಮೆ ನನಗಿನ್ನು ಇರಲಿಲ್ಲ. ನನ್ನ ಹಠ,
ಮೊಂಡುತನ, ತರಲೆ ಎಲ್ಲಾ ಹೇಗೆ ಸಹಿಸ್ಕೊಂಡಿದ್ರೊ ಗೊತ್ತಿಲ್ಲ. ಅಕ್ಕನ ಪ್ರೀತಿಯನ್ನೇ ಕಂಡಿರದ ನನಗೆ ನಿಜವಾಗ್ಲೂ ತುಂಬಾನೆ ಖುಷಿ ಕೊಟ್ಟ ದಿನಗಳವು. ಹೇಗೆ ಮರೆಯಲಿ ’ಆ ದಿನಗಳ’?
-----ದೀಪಿಕಾ
Sunday
ದೀಪಿಕಾ ಸೇ --೧
Subscribe to:
Post Comments (Atom)
0 comments:
Post a Comment