ಮೊನ್ನೆ ಯುಗಾದಿ ಹಬ್ಬ....ಹೊಸ ವರುಷ.....ಮನೆಯವರ ಜೊತೆ ಹಬ್ಬ ಆಚರಿಸಬೇಕೆನ್ನುವ ಆಸೆಯಾಗಿ ಮನೆಗೆ ಹೊರಟೆ....ಉಗಿಬಂಡಿಯಲ್ಲಿ ಪ್ರಯಾಣ ಮಾಡಬೇಕಾದಪರಿಸ್ಥಿತಿ ಹಾಗಾಗಿ ಉಗಿಬಂಡಿಯ ಪ್ರಯಾಣ ಶುರು..
ಹೀಗೆ ಪ್ರಯಾಣದಲ್ಲಿ ನನ್ನ ಪಕ್ಕ ಒಂದುಹುಡುಗಿ ಕೂತಿದ್ದಳು, ಹೀಗೇ ಮಾತಾಡ್ತಾ..ಮಾತಾಡ್ತಾ.. ಅವಳೂ ನವೋದಯಕ್ಕೆ ಸೇರಿದಾಳೆಅಂತ ಗೊತ್ತಾಯ್ತು. ಆಗ ನನ್ನ ಮನಸ್ಸು ನನ್ನ ಜೀವನದ ಹಳೇಯ ನೆನಪುಗಳನ್ನ ತಿರುವುಹಾಕಲು ಮುಂದಾಯಿತು...
ಇನ್ನೂ ನೆನಪಿದೆ ನಂಗೆ ಆ ದಿನ ೧೪th ಜುಲೈ ನಾನು ಅಪ್ಪ ನವೋದಯಕ್ಕೆ ಕಾಲಿಟ್ಟದಿನ.... ಹೇಗ್ತಾನೆ ಮರೆಯೋಕೆ ಸಾಧ್ಯ? ಅಂದ್ರೆ ನನ್ನ ಜೀವನದ ಅತ್ಯಮೂಲ್ಯ ದಿನ ಅದು.
ನಾನಿದ್ದದ್ದು ಒಂದು ಸಣ್ಣ ಊರಲ್ಲಿ, ಅಲ್ಲಿನ ಪ್ರಪಂಚನೇ ಬೇರೆ..!! ಆದರೆ ನವೋದಯಕ್ಕೆ ಬಂದಾಗಇಲ್ಲಿತ ವಾತವರಣ ನೊಡಿ ಏನೋ ಉಲ್ಲಾಸ... ಏನೋ ತಳಮಳ... ಏನೋ ಹೊಸ ಅನುಭವಜೊತೆಗೆ ಸ್ವಲ್ಪ ಭಯ.. ಭಯ ಯಾಕಂತೀರಾ? ಒಳ್ಳೆಯ ವಿದ್ಯಾರ್ಥಿನಿ ಆಗ್ತೀನೋ ಇಲ್ವೋ.. ಇದೆಲ್ಲದರ ಜೊತೆ ಹೊಂದಿಕೊಂಡು ಹೋಗ್ತೀನಾ ಅಂತ.... ಆ ದಿನ ನನ್ನ ಮನದಲ್ಲಿ ಆಗ್ತಿದ್ದಸಣ್ಣ ಸುನಾಮಿ ಅದು...
ಓಬವ್ವ (ಮದಕರಿ) ಸದನದಲ್ಲಿ ಪ್ರಮೀಳ ಕಾಟ್ಮೆಟ್ ನಾನು.. ೫;೩೦ ಗೆ ಜಾಗಿಂಗ್,೭;೩೦ ಗೆ ಅಸ್ಸೆಂಬ್ಲಿ, ೮;೩೦ ಗೆ ತಿಂಡಿ, ೧೧ ಕ್ಕೆ ಬಾಳೆ ಹಣ್ನು, ೧;೩೦ ಗೆ ಊಟ,It took almost a month for me to get adjusted to the routine…ದಿನಗಳಲ್ಲಿ ಜಾಗ್ ಮಾಡಲು, ಯೂನಿಫಾರ್ಮ್ ಹಾಕಲು ಖುಷಿ.., ಎಷ್ಟಂದ್ರೆ ೫ ಗಂಟೆಗೆಪೌಡರ್ ಹಾಕೋಂಡು ಜಾಗಿಂಗ್ ಹೋಗ್ತಿದ್ದೆ... ನಗು ಬರುತ್ತೆ ಈಗ ಆ ದಿನಗಳ ನೆನೆಸಿಕೊಂಡ್ರೆ...12th ಬರುವಷ್ಟ್ರಲ್ಲಿ ಎಷ್ಟು ಸೋಮಾರಿ ಆಗಿದ್ದೆ ಅಂದ್ರೆ,.. ಬ್ರಷ್ ಮಾಡಲು ಸೋಮಾರಿ.. ಇನ್ನು ಪೌಡರ್ ಮಾತೆಲ್ಲಿ? ಆ ಪೌಡರ್ ಡಬ್ಬಿ ಇನ್ನು ನೆನಪಿಗೆ ಇಟ್ಟಿದೀನಿ, ಮನೇಲಿದೆ.
class room ನಲ್ಲಿ ತುಂಬಾ enjoy ಮಾಡ್ತಿದ್ವಿ. ಮರೆಯಕೇ ಆಗಲ್ಲ ಗೋವಿಂದಪ್ಪ ಗುರುಗಳ ಕನ್ನಡ ಪಾಠ., ಅಗ್ಸರ್ ಗುರೂಜಿಯ ಹಿಂದಿ ಪಾಠ.., ಇನ್ನು ಎಲ್ಲರ ಪಾಠ ಹಾಗೆ ಕಣ್ಣಿಗೆ ಕಟ್ಟದ ಹಾಗೆ ಇದೆ. ಹಿಂದಿಯಲ್ಲಿ ಮೈಥಿಲಿ ಶರಣ್ ಗುಪ್ತ ಜೀ ಅವರು ಬಾಲ್ಯುದ ಬಗ್ಗೆ ಬರೆದಿರುವ ಕವಿತೆ ನೆನಪಿಗೆ ಬರುತ್ತೆ “Baar Baar Aati Mujhko Madhur Yaad bachpan Teri Gaya Le Gayaa Tu Jeevan Ki Sabse Mast Khushi Meri..” ಈಗ ನನಗೂ ಹಾಗೆ ಅನಿಸುತ್ತಿದೆ... even now I am feeling like going back to those good old days… golden days…
Saturday
Bindu Says...
Subscribe to:
Post Comments (Atom)
0 comments:
Post a Comment