Friday

Deepak.D alias DD says -2

ಆತ್ಮೀಯ ಗೆಳೆಯರೇ, ಗೆಳತಿಯರೇ
ನಿಜ ಹೇಳುವುದಾದರೆ ನಮ್ಮ ನವೋದಯದ ಬಗ್ಗೆ ಒಂದೆರಡು ಸಾಲುಗಳಲ್ಲಿ ಹೇಳುವುದು ಕಷ್ಟ ಮಾತ್ರ ಅಲ್ಲ ಅಸಾಧ್ಯ ಕೂಡ...ಒಂದೊಂದು ನೆನಪುಗಳು ಸಹ ಹೊಟ್ಟೆ ಹುಣ್ಣಾಗಿಸುವಷ್ಟು ನಗು ಬರಿಸುತ್ತವೆ..ನೆನಪುಗಳೇ ಹೀಗೆ.. ಅವುಗಳನ್ನು ಪುನಃ ಪುನಃ ನೆನೆಯುವುದೇ ಒಂದು ಖುಷಿ.. ನೆನಪಿನ ಬಗ್ಗೆ ನನ್ನದೊಂದು ಸಣ್ಣ ಕವನ..

ಬರಿಯ ಕಲ್ಪನೆಗಲು
ಕಲ್ಪನೆಗಲಾಗಿಯೇ ಉಳಿದವು
ಘಟಿಸದೆ ಮನದಲ್ಲಿ
ಬೇಡವಾದ ನೆನಪಾಗಿ
ಉಳಿದುಕೊಂಡವು.,

ಘಟಿಸಿದ ಕೆಲವಾರು
ಮತ್ತೆ ಘಟಿಸುವ
ನಿರೀಕ್ಷೆಯೊಂದಿಗೆ
ತೇಲಾಡಿದವು

ಅವು ಘಟಿಸದಾಗ
ಘಟನೆಯ ನೆನಪುಗಳೇ
ಮತ್ತೆ ಮತ್ತೆ ಘಟಿಸಿದವು......

"ನೆನಪುಗಳ ನೆನಪೇ ಚಂದವೆಂದು".,

ಮೊದಮೊದಲು ಬಂದಾಗ ಮನೆಯ ನೆನಪಲ್ಲಿ ಅನವರತ ಅತ್ತಿದ್ದು.. ಹೊಸ ಮುಖಗಳೊಂದಿಗೆ ಸಾವಧಾನದೊಂದಿಗೆ ಕಲೆತ್ತಿದ್ದು.. ಹೊಸ ಪ್ರಪಂಚದಲ್ಲಿ ನಮ್ಮದೇ ಆದ ಹೊಸ ಪರ್ವವನ್ನು ಕಂಡುಕೊಂಡಿದ್ದು.. ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.. ಹಿಂದಿ ಪಿರೇಡಿನಲ್ಲಿ ನಾವು ಹಾಡು ಹೇಳುತ್ತಿದ್ದದ್ದು..English period ನಲ್ಲಿ ಸರಿ ಉತ್ತರ ಹೇಳಿ ಹುಡುಗರು ಹುಡುಗಿಯರಿಗೆ, ಹುಡ್ಗೀರು ಹುಡುಗರಿಗೆ ಕಪಾಳಕ್ಕೆ ಹೊಡೆಯುತ್ತಿದ್ದದ್ದು.. Science periodನಲ್ಲಿ ಚರ್ಚೆಗಳು.. ಬಾಳೆಹಣ್ಣು ತಿನ್ನಲು Double trip ಹೋಗುತ್ತಿದ್ದದ್ದು.. ನೆನಪಿಸಿಕೊಂಡರೆ ಪ್ರತಿಯೊಂದೂ ವಿಶಿಷ್ಟ, ವಿಭಿನ್ನ.. ಅಯ್ಯೋ ಹೋಗ್ಲಿ ಬಿಡ್ರೀ ಹೇಳ್ತಾಹೋದ್ರೇ ಬೇಜಾನ್ ಐತೆ.. ನೆನಪಿನ ಬುತ್ತಿ ಸಮುದ್ರ ಇದ್ದಂಗೆ ಎಷ್ಟು ನೀರ್ ಕುಡುದ್ರೂ ಖಾಲಿ ಆಗೋ Sceneನೇ ಇಲ್ಲ.. ಸರಿ next time Detail DVಇನ್ನೊಂದು ಯಾವುದಾದರು ವಿಷಯದ ಬಗ್ಗೆ ಹೇಳ್ತೀನಿ ಸದ್ಯಕ್ಕೆ ಈಟ್ ಓದಿ ಖುಷಿ ಪಡಿ.. ಇಂತಿ ನಿಮ್ಮ ಪ್ರೀತಿಯ ನಾನ್ಯಾರು ಅಂದ್ರೇ...ದೀಪಕ್(ಆಆ).. ತುಮಕೂರು.........

1 comments:

Anonymous said...

It was not in 6th we were beating eachother in English period but it was in 7th I hope..