ಪ್ರೀತಿಯ ಗೆಳೆಯ ಗೆಳತಿಯರಿಗೆ,
೮ನೇ ತರಗತಿಯಲ್ಲೊಂದು ದಿನ ೭ಗಂಟೆ Assembly ಬಹಳ ಜನ absent ಆಗಿದ್ರು.. ಬೇರೆ ಸದನಕ್ಕೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಜನ absent ಆಗಿದ್ರು. ಆದ್ರು ಕೂಡ ಬೇರೆ ಸದನಪಾಲಕರು ಒಂದು ಹೊಡೆತವೂ ಹೊಡೆಯದೆ ಬಿಟ್ಟುಬಿಟ್ಟರು.. ಆದರೆ ನಮ್ಮಲ್ಲಿದ್ದನಲ್ಲ ಯಮಧರ್ಮ ಮಾಮ, ದಪ್ಪ ದೊಣ್ಣೆ ಹಿಡಿದು ಬಂದೇ ಬಿಟ್ಟ್ರು..ಆಗ ಎಲ್ಲರ ಜಂಘಾಬಲವೇ ಉಡುಗಿಹೋಯಿತು.. ಜೊತೆಗೆ ನಮ್ಮ ಕೃಷ್ಣರಾವ್ ಸರ್ ಬಂದ್ರು.. ಅದರ ಹಿಂದಿನ ದಿವಸವೆ ಮಳೆ ಬಂದಿತ್ತು.. ಕೊಚ್ಚೆಯಲ್ಲಿ ಬಿದ್ದಿದ್ದ ಕೋಲು ತೆಗೆದುಕೊಂಡು ಸಾಲಿನ ಮೊದಲಲ್ಲಿದ್ದ ಡಿ.ದೀಪಕ್ ಭುಜಕ್ಕೆ ಒಂದು ಕೊಟ್ಟರು.. ಅದರ ಕೆಸರು ಕಲೆ ಅವ್ನ ಅಂಗಿಗೆ ಮೆತ್ತಿಕೊಂಡಿತು. ನಂತರ ಶುರುವಾಯಿತು ನಮ್ಮ ಯಮರಾಯರ ಕೆಲಸ..ಕೈಲಿದ್ದ ದೊಣ್ಣೆಯಿಂದ ಎರೆರೆಡರಡು ಹೊಡೆತ ಕೊಡುವುದೆಂದು ನಿರ್ಧಾರವಾಯಿತು. ನಮ್ಮಲ್ಲಿದ್ದ ಒಬ್ಬನೇ senior ಅಂದ್ರೆ ನವೀನ್... ಮೊದಲು ದೀಪಕ್ಗೆ.. ಅವ್ನು ಅವುಡುಗಚ್ಚಿ ಅಳಲು ಶುರು ಮಾಡಿದ.. ನಂತರ ಶಿವಕುಮಾರ್, ವಿನಾಯಕ, ನಾನು, ನವೀನ್..
ನನ್ನ ಸರದಿ ಬಂತು.. ಬೇಸ್ ಬಾಲ್ ಶೈಲಿಯಲ್ಲಿ ಬಿಟ್ಟರು ನೊಡಿ, ಕುಂಡೆಗೆ ಸಿಡಿಲು ಬಡಿದಂತಾಯಿತು. ಇನ್ನೊಂದು ಸ್ವಲ್ಪ ಮೆತ್ತಗೆ ಬಿತ್ತು.. ನಂತರ ಶುರುವಾಯಿತು ನೋಡಿ ನವೀನ್ಗೆ, full ಹೊಡೆತ.. ಅದ್ಯಾಕೊ ಗೊತ್ತಿಲ್ಲ, ನಗು ಬರಲು ಶುರುವಾಯಿತು.. ಅಳುತ್ತಿದ್ದ ವಿನಾಯಕನನ್ನು ಸಮಾಧಾನ ಮಾಡುತ್ತಿದ್ದೆ.. ಜೊತೆಗೆ ನಗುತ್ತಲೂ ಇದ್ದೆ.. ಆಗ ಅದು ಹೇಗೋ ನಮ್ಮ ಮಾಮನ ಕಣ್ಣಿಗೆ ಬಿತ್ತು.. ಸೀ ದಟ್ Fellow, ಹಿ ಇಸ್ ಯಾಕ್ಟಿಂಗ್ ಎಂದು ಕೃಷ್ಣರಾವ್ ಸರ್ ಗೆ ಹೇಳಿ, ಬಂದು ಕಪಾಳಕ್ಕೆ ಒಂದು ಹೊಡೆತ ಕೊಟ್ಟರು.. ನಂತರ ಕೂಡ ನಗು ಮುಂದುವರಿಯಿತು.. ನಂತರ ಕೂಡ ಅದೂ ಕಣ್ಣಿಗೆ ಬಿದ್ದರೂ ಏಕೋ ಏನು ಮಾಡಲಿಲ್ಲ.. ನಂತರ ಎಲ್ಲರೂ ನೋವಿನಿಂದ ಕ್ಲಾಸ್ಗೆ ಹೋದೆವು..
ಇಂತಿ ನಿಮ್ಮ ಪ್ರೀತಿಯ,
ವಿನಯ್...

0 comments:
Post a Comment