ಒಂದ್ಸಾರಿ ಹಿಂಗೆ ನಮ್ ಬಲ್ಡ ಸಾರ್ ಅದೇ ರೀ ಶ್ರೀನಿವಾಸ್ ರಾವ್ ಮೊದಲನೇ ಪಿರೇಡೆ ಪಾಠ ಶುರು ಹಚ್ಕೊಂಡಿದ್ರು.. ಅದೇನೋ ಸುಡುಗಾಡು ಬರೆದುಕೊಂಡು ಬರಕೆ ಹೇಳಿದ್ರು.. ನಾನೋ ಮೊದ್ಲೇ ಸೋಮಾರಿ ನನ್ಮಗ ಹಂಗೆ ಬಂದಿದ್ದೆ.. ಸರಿ, ಸಾರ್ ಒಂದು ಕಡೆಯಿಂದ ಎಲ್ಲರದ್ದೂ ಚೆಕ್ ಮಾಡ್ತಾ ಬರ್ತಾ ಇದ್ರು.. ಯಾರ್ ಯಾರ್ ಬರಿದೇ ಬಂದಿದ್ರೋ ಅವರಿಗೆಲ್ಲಾ ಡಸ್ಟರ್ ತಗಂಡ್ ಬಿಸಿ ಮುಟ್ಟುಸ್ತಾ ಬರ್ತಿದ್ರು..
ಅದ್ಯಾಕೋ ಅವತ್ತು ನಾನು ಒದೆ ತಿನ್ನೋ ಲಹರಿಯಲ್ಲಿ ಇರ್ಲಿಲ್ಲ.. ಇನ್ನೇನು ಹತ್ತಿರ ಬರ್ಬೇಕು ಆಗ ನಂಗೊಂದು ಉಪಾಯ ಬಂತು... ಆ ಕ್ಷಣಕ್ಕೆ ಅದೇ ಸರಿ ಅನ್ಸಿ ಬೆಂಚ್ ಕೆಳಗಡೆ ಬ್ಯಾಗ್ ಅಡ್ಡ ಹಿಡ್ಕೊಂಡು ಅಡಗಿ ಕೂತೆ.. ಅದೇನ್ ಕರ್ಮನೋ ಏನೋ ಯಾವತ್ತೂ ಇಲ್ದೋರು ಅವತ್ತೇ ಎರಡು ಪಿರೇಡು ತೆಗೆದುಕೊಂಡು ಬಿಟ್ರು...!!!!
ಈ ಕಡೆ ನಂಗೊಂತೂ ಕೈ ಕಾಲೆಲ್ಲಾ ನೋವು ಆವರಿಸಿಕೊಂಡು ಸಾಕಪ್ಪಾ ಜೀವನ ಅನ್ನಂಗೆ ಆಗಿಬಿಟ್ಟಿತ್ತು... ಪುಣ್ಯಾತ್ಮ ಕೊನೆಗೂ ಬಿಟ್ಟ.. ಮಧ್ಯ ಮಧ್ಯ ಬೇರೆ ಎಲ್ಲಾರು ಬಗ್ಗಿ ಬಗ್ಗಿ ನೋಡಿ ಬಿಟ್ಟಿ ಮಜಾ ಮಾಡಿದ್ರು.. ಅಂತು ಇಂತು ಕ್ಲಾಸ್ ಬಿಟ್ಮೇಲೆ ಬೆಂಚ್ ಬಿಟ್ಟು ಹೊರಗೆ ಬಂದಾಗ ಅಷ್ಟೂ ಹೊತ್ತು ಎಲ್ಲೊ ಹೋಗಿಬಿಟ್ಟಿದ್ದೆ ಅನ್ನಿಸ್ತು.. ಕಾಲು ಎರಡೂ ರಕ್ತ ಪರಿಚಲನೆ ಇಲ್ಲದೆ ಸ್ವಲ್ಪ ಹೊತ್ತು ನಡೆಯಲಾಗದೆ ಕುಂತಲ್ಲೇ ಕೂತ್ಕೊಂಡ್ ಬಿಟ್ಟೆ...!! ಶಿವ ಶಿವ ನನ್ನ ಸ್ಥಿತಿ ಅವತ್ತು ಏನಂತ ಹೇಳ್ಲಿ ಗೆಳೆಯರೇ ????
ಎಲ್ರಿಗೂ ನನ್ನೀ ಅನುಭವ ಖುಷಿ ಕೊಟ್ಟಿದೆ ಅಂತ ಅಂದುಕೊಂಡು ಇದ್ದೀನಿ...
ಇಂತಿ ನಿಮ್ಮ ಪ್ರೀತಿಯ......
ದೀಪಕ್ ಅಲಿಯಾಸ್ ಡಿಡಿ...
ಮತ್ತೆ ಸಿಗೋಣ ಕಣ್ರಪ್ಪಾ...!!

1 comments:
i remember... dd... wonderfull appa... keep blogging
Post a Comment