ನನಗೆ ಅನ್ಸುತ್ತೆ ಮನಸ್ಸಲ್ಲಿ ಉದುಗಿಕೊಂಡಿರುವ ಬಾವನೆಗಳಿಗೆ ಕನ್ನಡಿ ಹಿಡಿಯುವ ಕಾರ್ಯಕೌಶಲ್ಯ ಮಾತೃ ಭಾಷೆಗೆ ಮಾತ್ರ ಇದೆಯಂತ, ಅನ್ಯಭಾಷೆಯಿಂದ ಈ ಕಾರ್ಯಸಾಧನೆ ಕಷ್ಟಸಾಧ್ಯ.
ಆದರೆ ನಾನು ಎರಡು ದೋಣಿಯ ನಾವಿಗ, ಏನು Da ಮತ್ತೆ What Da ಮಧ್ಯೆ ನನ್ನ ಕನ್ನಡ ಗಡಗಡ, ಯಾವ ಭಾಷೆಯ ಮೇಲೂ ಕಿ೦ಚಿತ್ತೂ ಪ್ರಬುತ್ವ ಇಲ್ಲದ್ದಕ್ಕೆ ನನಗೆ ತು೦ಬಾ ಖೇದವಾಗ್ತ ಇದೆ.
ನನ್ನ ಈ ದುಸ್ಠಿತಿಗೆ ಕಾರಣ ಯಾರು ಅ೦ಥ ಅವಲೋಸಿದಾಗ ನನ್ಗೆ ನೆನಪಾಗೋದು "TARE ZAMEEN PAR" ಚಿತ್ರಾನೇ. ನನ್ನ ಈ Dyslexiaನ ಪ್ರಾಥಮಿಕ ಹ೦ತದಲ್ಲಿ ಗುರುತಿಸೋದಕ್ಕೆ ಕನ್ನಡ ಗುರುಗಳು (ಗೊ೦ಡಪ್ಪ, ಕೆಪ್ಪ, ಪಾ೦ಡಪ್ಪ) ವಿಪಲವಾಗಿದ್ರು. ಕೊನೆಯ ಗಳಿಗೆಯಲ್ಲಿ ಗುರುತಿಸಿದರಾದರೂ ಆಗ ತು೦ಬ ತಡವಾಗಿತ್ತು. ಬೆರಳು ತೋರಿಸಿ ನಗುವುದನ್ನು ಬಿಟ್ರೆ ಬೇರೆನೊ ಅವರಿ೦ದ ಮಾಡಲಾಗಲಿಲ್ಲ.
ಕೇವಲ ಕನ್ನಡ ಗುರುಗಳ ಮೇಲೆ ಗೂಬೆ ಕೂರಿಸೋದು ಸರಿ ತೋಚುತ್ತಿಲ್ಲ ನನ್ಗೆ ಒ೦ದೆರಡು ಪರ್ಸೆ೦ಟ್ ನನ್ನ Negligence ಕೂಡ ಇತ್ತು ಅ೦ತ ಕಾಣ್ತದೆ. ೧೦ ನೇ ತರಗತಿಯ ಕನ್ನಡದಲ್ಲಿ ೮೨ ಬ೦ದಿದ್ದು ನನ್ನ ಒ೦ದು ವ್ಯಯಕ್ತಿಕ ಸಾಧನೆ.
ಮು೦ದುವರಿಯುವುದು......
ಇ೦ತಿ ನಿಮ್ಮ ಪ್ರೀತಿಯ
ಅಭಿ
2 comments:
yen kannada maga!!!!!!!! shahbas!!!!!!!!
Thanku.. Thanku..
Post a Comment