ಪ್ರೀತಿ ರಶ್ಮಿ
ಭಾವನೆಗಳ ಮಳೆಯಲ್ಲಿ
ಹಾದು ಹೋಗುತಿತ್ತು
ಮನಸ ಹಿನ್ನಲೆಯಲ್ಲಿ
ಮಳೆಬಿಲ್ಲೊಂದು ಮೂಡಿತ್ತು..
ಹೌದು, ಪ್ರೀತಿ ಮಳೆಬಿಲ್ಲು
ಹೆಚ್ಚೇನು ಅಂತರವಿಲ್ಲ
ಅಲ್ಲಿ ಸಪ್ತರಂಗು
ಇಲ್ಲಿ ಸಹಸ್ರ ರೂಪ
ಸಪ್ತರಂಗಗಳೂ ಸೇರಿ ಶ್ವೇತವಾದಂತೆ
ಸಪ್ತಸ್ವರಗಳೂ ಸೇರಿ ಸಂಗೀತವಾದಂತೆ
ಸಹಸ್ರರೂಪಗಳೂ ಸೇರಿ
ಪ್ರೀತಿಯಾದವು....
ಒಂದೊಂದು ಬಣ್ಣಕ್ಕೂ ತನ್ನದೇ ಸೌಂದರ್ಯ
ಒಂದೊಂದು ಸ್ವರಕ್ಕೂ ತನ್ನದೇ ಮಾಧುರ್ಯ
ಒಂದೊಂದು ರೂಪಕ್ಕೂ ತನ್ನದೇ ಆಂತರ್ಯ
ಇದಲ್ಲವೆ "ಪ್ರೀತಿ" ಗೀತೆಯ ಗಾಂಭೀರ್ಯ...??
ಸರ್ವಭಾವದ ಮಹಾನ್ ಸಂಯುಕ್ತ
ಉಛ್ಛಾರಣೆ ಬಲು ಸಂಕ್ಷಿಪ್ತ
ಇಳೆಯಲ್ಲಿ ಸದಾಕಾಲ ಸಶಕ್ತ
ಎಲ್ಲವೂ ನಮ್ಮ ಪ್ರಯುಕ್ತ....!!!!
-ದೀಪಕ್.,ತುಮಕೂರು
1 comments:
Keep it up...
Post a Comment